SVCT Mandya

WELCOME TO

Sri Venkateshwara

Charitable Trust

A charitable trust is a way to hold and protect assets (money, property, etc) for charitable purposes.

 The trust’s assets are managed according to the purpose set out in a trust deed, or an agreed set of rules.

Phone No

+91 80739 96345

Address

Abhinava Bharathi composite pu college near pushpa panduranga choutry Shankar nagar mandya 571402

Our Events

Anantha Prashasthi Pradhana Samaarambha

We wish a very happy birthday to our spiritual guru Swamiji on his birthday

On the occasion of SRI ANANTHAKUMARA SWAMIJI’S 87th birthday, Institute has celebrated the event ” SRI ANANTHA PRASHASTHI PRADHANA SAMAARAMBHA”.

Honoured Chief Guests:

Sri Sri Purushothamananda Swamiji Monk, Educationist, Philosopher, Spiritualist

Dr. C. N. Manjunanth
Eminent Cardiologist and Director of JICSR

Sir. Yogaathma Sri Hari
Yoga guru, Mentor, Social Activist and Entrepreneur.

Bhajan Sandhya

ಏಪ್ರಿಲ್ 13, ಶನಿವಾರ, ಅನಂತ ಧ್ಯಾನ ಮಂದಿರ ಮಂಡ್ಯದಲ್ಲಿ ನಡೆದ “ಸತ್ಸಂಗ” ದಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು.

ಸತ್ಸಂಗದಲ್ಲಿ ಕೀರ್ತನೆಗಳನ್ನು ಮಾಡಿದ ಶ್ರೀಮತಿ ಭಾಗ್ಯ ಮೂರ್ತಿ ರವರು ಮತ್ತು ಅವರ ತಂಡದ ಶ್ರೀಮತಿ ಲಕ್ಷ್ಮೀಶ್ರೀ ಅಜಯ್, ಶ್ರೀಮತಿ ಹೇಮಲತಾ, ಶ್ರೀಮತಿ ವೀಣಾ ಶ್ರೀಪಾದ, ಶ್ರೀ ಮೂರ್ತಿ ರವರು ಹಾಗು ಕಿಶನ್ ಮೂರ್ತಿ, ಸಂಗೀತ ನಿರ್ದೇಶಕರು ಎಲ್ಲರಿಗೂ ನಮ್ಮ ಹೃದಯ ಪೂರ್ವಕ ಧನ್ಯವಾದಗಳು

ಸತ್ಸಂಗದ ನಂತರ, ಶ್ರೀ ವೆಂಕಟೇಶ್ವರ ಚಾರಿಟಬಲ್ ಟ್ರಸ್ಟ್, ಮಂಡ್ಯ ವತಿಯಿಂದ, ಮಮತೆಯ ಮಡಿಲು, ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ, ಸ್ತ್ರೀರೋಗ – ಪ್ರಸೂತಿ ವಿಭಾಗದ ರೋಗಿಗಳಿಗೆ, ಅವರ ಸಂಬಂಧಿಕರುಗಳಿಗೆ : ಪ್ರತಿ ದಿನ ಅನ್ನದಾಸೋಹ ನಡೆಸಿಕೊಂಡು ಬಂದಿರುವ ಶ್ರೀಮತಿ ಮಂಗಳ ಯೋಗೀಶ್ ಪರಿಸರ ರವರು ಮತ್ತು ಅವರ ತಂಡದ ಸೇವೆಯನ್ನು ಗುರಿತಿಸಿ, ಅವರನ್ನು ಸನ್ಮಾನಿಸಲಾಯಿತು.

Sky Watching Event - Moodaladoddi

ಗ್ರಾಮೀಣ ವಿದ್ಯಾರ್ಥಿಗಳಿಗೆ ಗ್ರಹ-ನಕ್ಷತ್ರಪುಂಜಗಳ ವೀಕ್ಷಣೆ ಅಭಿಯಾನ
ಮಂಡ್ಯ: ಗ್ರಾಮೀಣ ವಿದ್ಯಾರ್ಥಿಗಳಿಗೆ ಆಕಾಶಕಾಯದಲ್ಲಿರುವ ಗ್ರಹ-ನಕ್ಷತ್ರ ಪುಂಜಗಳ ವೀಕ್ಷಣೆ ವೈಜ್ಞಾನಿಕ ಮನೋಭಾವ ಹೆಚ್ಚಿಸುತ್ತದೆ ಎಂದು ಶ್ರೀ ವೆಂಕಟೇಶ್ವರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಶಿವಮೂರ್ತಿ ಕೀಲಾರ ಹೇಳಿದರು.

ಮದ್ದೂರು ತಾಲೂಕಿನ ಮೂಡಲದೊಡ್ಡಿ (ಶ್ರೀಪತಿ) ಗ್ರಾಮದಲ್ಲಿರುವ ಶ್ರೀ ವೆಂಕಟೇಶ್ವರ ವಿದ್ಯಾನಿಕೇತನ ಶಾಲೆಯಲ್ಲಿ ಅಭಿನವ ಭಾರತಿ ಸಮೂಹ ಶಿಕ್ಷಣ ಟ್ರಸ್ಟ್ ಮಂಡ್ಯ ಮತ್ತು ಆಸ್ಟ್ರೋ ಸ್ಟೇಲ್ಲಾರ್ಸ್ ಅಕಾಡೆಮಿ ಬೆಂಗಳೂರು ಇವರ ಸಹಯೋಗದಲ್ಲಿ ನಡೆಸಲಾದ ಗ್ರಾಮೀಣ ವಿದ್ಯಾರ್ಥಿಗಳಿಗೆ ಟೆಲಿಸ್ಕೋಪ್ ಮೂಲಕ ನಕ್ಷತ್ರಗಳು ಮತ್ತು ಮಂಗಳ, ಬುದ್ಧ, ಶನಿ ಗ್ರಹಗಳ ವೀಕ್ಷಣೆ ಕಾರ್ಯಕ್ರಮ”ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿನ ಜಾಗತಿಕ ಪ್ರಪಂಚದಲ್ಲಿ ವೈಜ್ಞಾನಿಕ ವಿಚಾರಗಳು, ಅವಿಸ್ಕಾರಗಳು, ಸಂಶೋಧನೆಗಳು ನಡೆಯುತ್ತಿದ್ದು, ಇಂತಹ ವಿಜ್ಞಾನ- ತಂತ್ರಜ್ಞಾನ-ವೈಜ್ಞಾನಿಕ ವಿಷಯಗಳನ್ನು ತಿಳಿದುಕೊಳ್ಳಬೇಕು ಎಂದು ನುಡಿದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದು ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡುವುದಕ್ಕೆ ಇಂತಹ ಕಾರ್ಯಕ್ರಮಗಳು ಸ್ಪೂರ್ತಿ ನೀಡುತ್ತವೆ, ಆಕಾಶಕಾಯದಲ್ಲಿರುವ ಅಖಂಡತೆಯ ವೈಜ್ಞಾನಿಕ ವಿಸ್ಮಯಗಳು ಕಣ್ಣ ಮುಂದೆ ಕಂಡಾಗ ರೋಮಾಂಚನಗೊAಡು ತಂತ್ರಜ್ಞಾನ ಎಷ್ಟೋಂದು ಬೆಳೆದಿದೆ ಎನ್ನುವು ಮನೋವಿಕಾಸಗೊಳ್ಳುತ್ತದೆ ಎಂದರು.

ಇAದಿನ ದಿನಗಳಲ್ಲಿ ಗ್ರಾಮೀಣ ವ್ಯಾಪ್ತಿಯಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಪ್ರತಿ ಮಗುವಿಗೂ ತಂತ್ರಜ್ಞಾನದ ಶಿಕ್ಷಣ ಲಭ್ಯವಾಗಿ ಪ್ರತಿಭಾವಂತರನ್ನಾಗಿಸುವ ಕಾರ್ಯವನ್ನು ಶಾಲೆಯಗಳು ಮಾಡುತ್ತಾ ಬಂದಿದೆ ಎಂದು ತಿಳಿಸಿದರು.

ಈ ನಿಟ್ಟಿನಲ್ಲಿ ಸಂಸ್ಥೆಯು ಒಂದು ಹೆಜ್ಜೆ ಮುಂದೆವರೆದು ಟೆಲಿಸ್ಕೋಪ್ ಮೂಲಕ ಆಕಾಶಕಾಯದಲ್ಲಿರುವ ಗ್ರಹಗಳನ್ನು ವಿದ್ಯಾರ್ಥಿಗಳಿಗೆ ವೀಕ್ಷಣೆ ಮಾಡಿಸುವ ಸುಕಾರ್ಯವನ್ನು ಯಶಸ್ಸಿಗೊಳಿಸಲಾಗುತ್ತಿದೆ, ಸ್ಟಾರ್ ಗೇಜಿಂಗ್ ನೈಟ್ ಎಂಬ ಕಾರ್ಯಕ್ರಮವನ್ನು ಏರ್ಪಡಿಸಿದ್ದೇವೆ ಎಂದರು.

ಟೆಲಿಸ್ಕೋಪ್ ಮೂಲಕ ಆಕಾಶದಲ್ಲಿರುವ ನಕ್ಷತ್ರ ಪುಂಜ ಮತ್ತು ಮಂಗಳ, ಬುಧ, ಚಂದ್ರ, ಕ್ಷೀರ ಪಥ ( ಹಾಲು ಹಾದಿ ) ಗ್ಯಾಲಕ್ಸಿಯ ಇಣುಕುನೋಟ, ಉಂಗುರಗಳೊAದಿಗೆ ಶನಿ ಗ್ರಹ, ನಿಹಾರಿಕೆ ಎಂಬ ಗ್ರಹಗಳ ವೀಕ್ಷಣೆ ಮಾಡಿಸುತ್ತೇವೆ ಎಂದು ಹೇಳಿದರು.

ಇದೇ ಸಂಧರ್ಭದಲ್ಲಿ ಮಂಡ್ಯ ತಾಲೂಕಿನ ಕೀಲಾರ ಮತ್ತು ಈಚಗೆರೆ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಗ್ರಹ-ನಕ್ಷತ್ರಗಳ ವೀಕ್ಷಣೆಯನ್ನು ಮಾಡಿದರು.

ಕಾರ್ಯಕ್ರಮದಲ್ಲಿ ಸಹಭಾಗಿಯಾಗಿದ್ದ ಆಸ್ಟ್ರೋ ಸ್ಟೇಲ್ಲಾರ್ಸ್ ಸಂಸ್ಥೆಯವರಾದ ಪ್ರಜ್ವಲ್ ಮತ್ತು ಶಿವಪ್ರಕಾಶ್ ಹಾಗೂ ಇತರರು ಹಾಜರಿದ್ದರು.

ಮದ್ದೂರು ತಾಲೂಕಿನ ಮೂಡಲದೊಡ್ಡಿ (ಶ್ರೀಪತಿ) ಗ್ರಾಮದಲ್ಲಿರುವ ಶ್ರೀ ವೆಂಕಟೇಶ್ವರ ವಿದ್ಯಾನಿಕೇತನ ಶಾಲೆಯಲ್ಲಿ ಅಭಿನವ ಭಾರತಿ ಸಮೂಹ ಶಿಕ್ಷಣ ಟ್ರಸ್ಟ್ ಮಂಡ್ಯ ಮತ್ತು ಆಸ್ಟ್ರೋ ಸ್ಟೇಲ್ಲಾರ್ಸ್ ಅಕಾಡೆಮಿ ಬೆಂಗಳೂರು ಇವರ ಸಹಯೋಗದಲ್ಲಿ ನಡೆಸಲಾದ ಗ್ರಾಮೀಣ ವಿದ್ಯಾರ್ಥಿಗಳಿಗೆ ಟೆಲಿಸ್ಕೋಪ್ ಮೂಲಕ ನಕ್ಷತ್ರಗಳು ಮತ್ತು ಮಂಗಳ, ಬುದ್ಧ, ಶನಿ ಗ್ರಹಗಳ ವೀಕ್ಷಣೆ ಕಾರ್ಯಕ್ರಮ”ಕ್ಕೆ ಶ್ರೀ ವೆಂಕಟೇಶ್ವರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಶಿವಮೂರ್ತಿ ಕೀಲಾರ ಚಾಲನೆ ನೀಡಿದರು.

Kaveri Aarthi

ದಿನಾಂಕ 25-03-2024 ರಂದು ಶ್ರೀ ದುರ್ದಂಡೇಶ್ವರ ಮಹಂತ ಶಿವಯೋಗಿಗಳ ಮಠ ಡಿ ಎಂ ಎಸ್ ಚಂದ್ರಮನ ಆಶ್ರಮ ಹಾಗೂ ಶ್ರೀ ವೆಂಕಟೇಶ್ವರ ಚಾರಿಟಬಲ್ ಟ್ರಸ್ಟ್ ವತಿಯಿಂದ 136 ನೇ ಬೆಳದಿಂಗಳ ದೀಪಾರತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಡಾ. ಶ್ರೀ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿಗಳ ಸಾನಿಧ್ಯದಲ್ಲಿ ನಡೆದ ಕಾವೇರಿ ತಾಯಿಗೆ ಬೆಳದಿಂಗಳ ದೀಪಾರತಿ, ಮಂಡ್ಯ, ಮೈಸೂರು, ಮಡಿಕೇರಿ ಇನ್ನೂ ಹೆಚ್ಚಿನ ಜನರಿಗೆ ಕಾವೇರಿ ನದಿಯ ಬಗ್ಗೆ ವಿಶೇಷವಾದ ಗೌರವ ಇದೆ. ಕಾವೇರಿ ನದಿಯು ನಮ್ಮಲ್ಲಿ ಹಲವರಿಗೆ ಜೀವನದ ಮೂಲಾಧಾರವಾಗಿದೆ. ಒಂದು ರೀತಿಯಲ್ಲಿ ಜೀವಧಾರೆ ಎನ್ನಬಹುದು. ಈ ವರ್ಷದ ಬೇಸಿಗೆಯ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ, ಈ ಪರಿಣಾಮದ ತೀವ್ರತೆಯನ್ನು ಕಡಿಮೆಗೊಳಿಸಲು ಕಾವೇರಿ ತಾಯಿಗೆ ದೀಪಾರತಿ ಮಾಡುವ ಮೂಲಕ ಮಳೆಗಾಲವನ್ನು ಸಮೃದ್ಧಿ ಗೊಳಿಸುವ ಆಶಯವಾಗಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿ ಕಾವೇರಿ ತೀರದಲ್ಲಿರುವ ಚಂದ್ರಮನ ಆಶ್ರಮದಲ್ಲಿ ಬೇಬಿ ಮಠ ಮತ್ತು ಚಂದ್ರನ ಆಶ್ರಮದ ಪೀಠಾಧಿಪತಿಗಳಾದ ಡಾ. ಶ್ರೀ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿಗಳವರು ಪ್ರತಿ ತಿಂಗಳ ಹುಣ್ಣಿಮೆಯೆಂದು ಸಂಜೆ ಕಾವೇರಿ ಮಾತೆಗೆ ಬೆಳದಿಂಗಳ ದೀಪಾರತಿ ಮಾಡಿ ಬಂದು ಜನರಿಗೆ ಕೈ ತುತ್ತು ನೀಡಿ ಧಾರ್ಮಿಕ ಕಾರ್ಯಕ್ರಮ, ಸತ್ಸಂಗ ಕಾರ್ಯಕ್ರಮ, ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿರುತ್ತಾರೆ. ಉತ್ತರ ಭಾರತದಲ್ಲಿ ಹೇಗೆ ಗಂಗಾರತಿ ನಡೆಯುತ್ತದೆಯೋ ಹಾಗೆ ದಕ್ಷಿಣ ಕರ್ನಾಟಕದಲ್ಲಿ ತ್ರಿನೇತ್ರ ಶ್ರೀಗಳು ಕಾವೇರಿ ಮಾತೆಗೆ ದೀಪಾರತಿಯನ್ನು ಮಾಡಿ ಇಡೀ ನಾಡಿಗೆ ರೈತರಿಗೆ ದೇಶ ಸುಭಿಕ್ಷವಾಗಲೆಂದು ಹಾರೈಸಿ, ಕಾವೇರಿ ದೀಪಾರತಿ ಮಾಡಿ ದೀಪವನ್ನು ತೇಲಿ ಬಿಡುತ್ತಾರೆ. ಶ್ರೀಗಳ ಜೊತೆಯಲ್ಲಿಯೇ ನೆರೆದಿರುವಂತಹ ಭಕ್ತರು ಕೂಡ ತಮ್ಮ ತಮ್ಮ ಸಂಕಲ್ಪಗಳೊಂದಿಗೆ ಕಾವೇರಿ ಮಾತೆಯಲ್ಲಿ ದೀಪಗಳನ್ನು ಬಿಡುತ್ತಾರೆ ನದಿಯಲ್ಲಿ ತೇಲಿ ಹೋಗುವ ದೀಪಗಳ ದೃಶ್ಯವನ್ನು ನೋಡಲು ರಮಣೀಯವಾದುದು.

ಈ ಕಾರ್ಯಕ್ರಮಕ್ಕೆ ಭಾಗವಹಿಸಿ ಕಾವೇರಿ ಆರತಿಯ ಬಗ್ಗೆ ಮಾತನಾಡಿದ ಶ್ರೀ ಸುರೇಂದ್ರ ಕುಮಾರ ಹೆಗ್ಗಡೆಯವರು ಸಿಇಓ, ಎಸ್ ಡಿ ಎಂ ಇ ಧರ್ಮಸ್ಥಳ, ನಾಡೋಜ ಮಹೇಶ್ ಜೋಶಿ, ಚಂದನ ದೂರದರ್ಶನ ನಿರ್ದೇಶಕರು ಹಾಗೂ ಶ್ರೀ ಜಯಪಕಾಶ್ ರವರು, ಹುಣಸೂರು ರವಿಯವರು ಕಾರ್ಯಕ್ರಮ ಕುರಿತಾಗಿ ಅದರ ಮಹತ್ವವನ್ನು ನೆರೆದಿರುವ ಎಲ್ಲಾ ಭಕ್ತ ಸಮೂಹಕ್ಕೆ ತಿಳಿಸಿದರು ಡಾ. ಶ್ರೀ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿಯವರು ಕಾವೇರಿ ತಾಯಿಗೆ ಸುಂದರ ಬೆಳದಿಂಗಳಲ್ಲಿ ದೀಪಾರತಿ ಮಾಡಿ, ಅಲ್ಲಿ ಸೇರಿದ ಭಕ್ತಾದಿಗಳಿಗೆ ಕೈ ತುತ್ತು ನೀಡಿ, ಇಡೀ ನಾಡಿಗೆ, ರೈತರಿಗೆ, ದೇಶದ ಸುಭಿಕ್ಷತೆಗೆ ಹಾರೈಸಿ, ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ವೆಂಕಟೇಶ್ವರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರು, ಅಭಿನವ ಭಾರತಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿಗಳಾದ ಶ್ರೀ ಶಿವಮೂರ್ತಿ ಕೀಲಾರರವರು ಸೇವಾರ್ಥಿಯಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಕಾವೇರಿ ಆರತಿ ಕಾರ್ಯಕ್ರಮಕ್ಕೆ ಸೇವಾರ್ಥಿಯಾಗಿ ಸೇವೆ ಸಲ್ಲಿಸಲು ನನಗೆ ಅವಕಾಶ ನೀಡಿದ ಭಗವಂತನಿಗೆ ನಾನು ಚಿರಋಣಿಯಾಗಿದ್ದೇನೆ. ಕಾವೇರಿ ಆರತಿಯಂತಹ ಕಾರ್ಯಕ್ರಮಗಳು ಮನುಷ್ಯನನ್ನು ಪಕೃತಿಯ ಸನಿಹಕ್ಕೆ ಕೊಂಡೊಯ್ಯುತ್ತಿದೆ.

Govt Hospital Free Lunch

Health Campus

Free Note Book Distribution at Goverment School

About Us

Ananta Dyana Mandira

Shri Shri Anantha Kumara Swamiji initiatid Sri Venkateshwara Dhyana Kendra to inspire people to inculcate a healthy way of life by yoga & meditation practise.

To go in this path, as he was well versed in Yoga so he conducted daily yoga & meditation classes, also was a devotee of Lord Venkateshwara every Saturday he used to conduct satsanga at Govinda Hall in ABVK, HPS, Mandya. Here many events used to take place under his supervision, like every year swamiji had adapted to conduct Aadhyatmika Vichara Darshana on 1st of January on Ugadi on Guru Poornima. Every poornima Satyanarayana Pooja was performed. Everyday, free yoga classes were also conducted.

Due to Covid & Swamiji’s ill health after demisal on 08/09/2020 all these had to be stopped.

As per swamiji’s wish to continue Yoga – Meditation & Satsang, the then General Secretary of Sri Venkateshwara Charitable Trust, Sri Shivamurthy Keelara, planned to build ‘ANANTHA DHYANA MANDIR’ in his fond memory.

Construction of Dhyana Mandir was completed & was inaugurated jointly by his Holiness Sri Sri Sri Shivarathri Deshikendra Mahaswamiji of Suttur Srikshetra & Sri Vinay Guruji Founder Mahathma Gandhi Seva Trust on 27/09/2021 with other dignitaries (Sri Chaluvaraya Swamy, Sri G Madhusudan, Sri Maritibbegowda, Sri H S Manju and Sri R. Girish) at Abhinava Bharathi PU College, Shankar Nagar, Mandya.

At Ananta Dhyana Mandir everyday Yoga & Meditation is performed, every Saturday Satsang takes place, which enhances the spirituality & purifies one’s soul.

Sri Venkateshwara Vidyanikethana(Sripathi), Moodaladoddi

The name itself is different: “SRIPATHI” it has started in the year 2002-2003 with 30 students when the school established its has only 4 classroom with sheet roofing, then Swamiji has constructed the building 4 classrooms.

Presently around 650 students are studying, the vast and miracle development has started from the year 2015-16 under the leadership of our general secretary Sri Shivamurthy Keelara. On May 14th 2016 newly Furnished building is grandly inaugurated by Sri Yadhuveer sri kantadatta vadeyar, thousands of people and other dignitaries have witnessed.

Sri Vykunta Vaarta

Year 2000 is marked as ‘Golden Year’ for Sri Venkatheshwara Dhyana Kendra because in this year monthly spiritual paper’s 1st edition in the name ‘Sri Vykunta Vaarta’ was published. In this paper Sri Sri Anantha Kumar Swamiji’s & other wellknown writer’s articles related to spiritual and Mythological writings were published every month. In 2010 Sri Vykunta Vaarta celebrated it’s 10th Anniversary which is still remembered. Since 2000 it was published regularly till 2020. As you all know pandemic Covid brought a stop to everything, moreover
due to Swamiji’s ill health it was stopped. Each & everyone thought that Sri Vykunta Vaarta has come to an end.

But, after Swamiji’s demise Sri Shivamurthy Keelara, President, Sri Venkateshwara Charitable Trust, took oath not to stop anything started by swamiji. Earlier Sri Vykunta Vaarta which was published every month, in the year 2021 Sri Shivamurthy Keelara came out with new ideas & thought of changing Sri Vykunta Vaarta into magazine.

On 29/03/2021 Sri Vykunta Vaarta was launched with new appearance, design & articles by Honorable Sri Surendra Kumar, Vice President, Sri Dharmasthala Manjunatheswara Shikshana Samsthe. In the forth coming days Vaikunta vaartha would transform as e-journal with subscription. He remembered his precious days spent with Sri Anantha Kumara Swamiji. He expressed his wishes & also appreciated Sri Shivamurthy Keelara for fulfilling Swamiji’s dream.

Honorable Sri Vishwavidananda Swamiji, Ramakrishna Ashrama, Mysuru, blessed everyone & also for the success of the magazine.

Sri Ravi. K. N, Editor Vaikunta Vaarta & Sri Shivamurthy Keelara solicited event.

Presently this magazine is being published every trimester consistently.

Our Magazines

Activities

Lets See Our Activities